ARCHIVES
VOL. 2, ISSUE 2 (2017)
ಭವರಹಿತೆ ಧೂಪದ ಗೊಗ್ಗವ್ವೆ
Authors
ಡಾ.ಕಾವ್ಯಶ್ರೀ. ಜಿ
Abstract
ಹೆಣ್ಣನ್ನು ದೇವತೆಯೆಂದು ಹೊಗಳದೆ, ರಾಕ್ಷಸಿ ಎಂದು ತೆಗಳದೆ ಹೆಣ್ಣನ್ನು ಹೆಣ್ಣಾಗಿ ಕಂಡು ಗೌರವಿಸಿದವರೆಂದರೆ ಹನ್ನೆರಡನೇ ಶತಮಾನದ ಶಿವಶರಣರು ಹಾಗು ಶಿವಶರಣೆಯರು. ಇಲ್ಲಿಯವರೆಗೆ ಶಿವಶರಣೆಯರ ಒಟ್ಟು 1104 ವಚನಗಳು ಲಭ್ಯವಾಗಿವೆ. ಯಾವುದೇ ಒಂದು ಚಳುವಳಿಯಲ್ಲಿ ಗಂಡಸಿಗೆ ಅನುಕೂಲವನ್ನು ಮಾಡಿಕೊಡುವ ಸಮಾಜ ಹೆಣ್ಣಿಗೆ ಮಾಡಿಕೊಡುವುದಿಲ್ಲ. ಇವರು ಸ್ತ್ರೀವಾದಿಗಳು. ಅಲ್ಲದೆ ಜಾತಿ, ಮತ, ಪಂಥ ಸಂಸ್ಕøತಿಗಳ ಮಿತಿಗಳನ್ನು ಗುರುತಿಸುತ್ತಲೆ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಅಂಥವರಲ್ಲಿ ಗೊಗ್ಗವ್ವೆಯ ಸಾಧನೆ ಅಪಾರ. ಗೊಗ್ಗವ್ವೆ ತನ್ನ ಜೀವನದುದ್ದಕ್ಕೂ ಬಹು ನಿಷ್ಠೆಯಿಂದ ಭಕ್ತಿಪೂರ್ವಕವಾಗಿ ಕಾಯಕ ಮಾಡಿ ತನ್ನಿಷ್ಟಲಿಂಗನಾದ ನಾಸ್ತಿನಾಥನಲ್ಲಿ ಐಕ್ಯವಾಗಿ ಮುಕ್ತಿ ಹೊಂದುತ್ತಾಳೆ. ಈಕೆಯ ಕುರಿತು ಹುಟ್ಟಿಕೊಂಡ ಪವಾಡ ಕಥೆಗಳಲ್ಲಿ ಸಿದ್ಧನಂಜೇಶನು “ಭವರಹಿತೆ ಧೂಪದಾ ಗೊಗ್ಗವ್ವೆಯೆಂಬಾಕೆ ಶಿವಗೆ ಧೂಪವ ನೀಡಿ ಕೈಲಾಸಪದವನುಂ ಶಿವಭಕ್ತರಿಗೆ ತೋರಿ ಶಂಕರನ ಕೃಪೆ ಪಡೆದಳ್” ಎಂದು ತನ್ನ ಕೃತಿಗಳಲ್ಲಿ ಉಲ್ಲೇಖಿಸಿದ್ದಾನೆ. ಕೈಲಾಸ ಎನ್ನುವುದು ಬೇರೆಲ್ಲಿ ಇಲ್ಲ. ಅದು ಎತ್ತರವಾದ ಪರ್ವತವಲ್ಲ. ಈ ಮತ್ರ್ಯದಿಂದ ಅದು ಬಹಳ ದೂರದಲ್ಲಿಯೂ ಇಲ್ಲ ‘ನಂಬಿ ಕರೆದರೆ ಓ ಎಂಬುವನು ಶಿವನು’ ಎನ್ನುವಂತೆ ಶಿವಾನುಭವಿಯಾದವನಿಗೆ ಶಿವನ ಕೈಲಾಸ ಒಂದು ಕೂಗಳತೆಯಂತಿದೆ. ಅದು ತನ್ನ ಅಂತರಂಗದಲ್ಲಿಯೇ ಇದೆ. ಅದನ್ನು ಅರಿಯಬೇಕು. ಕಂಡುಕೊಳ್ಳಬೇಕು. ತನ್ನ ಅರಿವಿನ ಮನೆಯೇ ಕೈಲಾಸ ಎಂಬ ಗೊಗ್ಗವ್ವೆಯ ವಚನ ಮಾತುಗಳು ಮಾರ್ಮಿಕವಾಗಿವೆ. ಪ್ರತಿವರ್ಷ ಗೊಗ್ಗವ್ವೆಯ ಜಾತ್ರೆ ಉತ್ಸವ ನಡೆದು ಮಹಾರಾಷ್ಟ್ರದಿಂದಲೂ ಸಹ ಭಕ್ತರು ಬಂದು ಗೊಗ್ಗವ್ವೆಯ ದರ್ಶನ ಪ್ರಸಾದ ಪಡೆದುಕೊಂಡು ಧನ್ಯರಾಗುತ್ತಾರೆ. ಹೆಣ್ಣುಮಕ್ಕಳಿಗಂತೂ ಗೊಗ್ಗವ್ವೆಯ ಮೇಲೆ ವಿಶೇಷ ಭಕ್ತಿ. ಜನಪದರು ಬೀದರ ಜಿಲ್ಲೆ ಮತ್ತು ಮಹಾರಾಷ್ಟ್ರಗಳಲ್ಲಿ ಗೊಗ್ಗವ್ವೆಯ ಕುರಿತಾಗಿ ಭಜನೆ ಹಾಡುಗಳನ್ನು ಕಟ್ಟಿ ಹಾಡಿರುವುದೂ ಇದೆ.
Download
Pages:106-109
How to cite this article:
ಡಾ.ಕಾವ್ಯಶ್ರೀ. ಜಿ "ಭವರಹಿತೆ ಧೂಪದ ಗೊಗ್ಗವ್ವೆ". International Journal of Academic Research and Development, Vol 2, Issue 2, 2017, Pages 106-109
Download Author Certificate
Please enter the email address corresponding to this article submission to download your certificate.
